ಸೊಳ್ಳೆ/ಜೇನುಹುಳು ಕಚ್ಚಿದಾಗ ಆ ಕಿರಿಕಿರಿಯಿಂದ ಹೊರಬರಲು ಈ ಸಿಂಪಲ್ ಟ್ರಿಕ್ಸ್ ಟ್ರೈ ಮಾಡಿ.!
ಸೊಳ್ಳೆ , ಇರುವೆ , ಜೇನುಹುಳ , ಇಂತಹ ಚಿಕ್ಕ ಚಿಕ್ಕ ಹುಳಗಳು ಕಚ್ಚಿದಾಗ ಆ ಜಾಗದಲ್ಲಿ ಗುಳ್ಳೆ, ನೋವು, ತುರಿಕೆ ಹಾಗೂ ಉರಿ ಹೆಚ್ಚಾಗುತ್ತದೆ .ಸಾಮಾನ್ಯವಾಗಿ ದೊಡ್ಡವರು ಈ ಕಿರಿಕಿರಿಯನ್ನು ತಡೆದುಕೊಳ್ಳುತ್ತಾರೆ .ಆದರೆ ಮಕ್ಕಳಿಗೆ ಆ ನೋವು ಅಥವಾ ಕಿರಿಕಿರಿಯನ್ನ ತಡೆದುಕೊಳ್ಳಲು ಸಾಧ್ಯವಾಗುವುದಿಲ್ಲ ಅಂತ ಸಂದರ್ಭದಲ್ಲಿ ತುರಿಕೆ ಅಥವಾ ಉರಿಯನ್ನು ಕಿರಿಕಿರಿಯನ್ನ ಕಡಿಮೆ ಮಾಡಲು ಈ ಸಿಂಪಲ್ ಟ್ರಿಕ್ಸ್ ನ ಟ್ರೈ ಮಾಡಿ.
ಅಡುಗೆ ಸೋಡಾ
1/2 ಟೇಬಲ್ ಸ್ಪೂನ್ ಅಷ್ಟು ಅಡುಗೆ ಸೋಡಕ್ಕೆ ಒಂದು ಸ್ಪೂನ್ ಎಷ್ಟು ನೀರನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ .ನಂತರ ಆ ಪೇಸ್ಟ್ ನ ಸೊಳ್ಳೆಗಳು (Mosquito/Honeybee)
ಅಥವಾ ಇರುವೆ ಕಚ್ಚಿರುವ ಜಾಗದಲ್ಲಿ ಹಚ್ಚುವುದರಿಂದ ರಿಯಾಕ್ಷನ್ ಬೇಗನೆ ಕಡಿಮೆಯಾಗುತ್ತದೆ, ತುರಿಕೆ ನಿವಾರಣೆ ಆಗುತ್ತದೆ.
Paurometabolous type of metamorphosis occurs in
(a) Cockroach
(b) Mosquito
(c) Housefly
(d) Honeybee
ಅಲೋವೆರಾ
ತ್ವಚೆಯ ಆರೋಗ್ಯಕ್ಕೆ ಅಲೋವೆರಾ ಬೆಸ್ಟ್ ರೆಮಿಡಿ. ಹಾಗೂ ಸೊಳ್ಳೆ ಕಚ್ಚಿದ ಜಾಗದಲ್ಲೂ ಕೂಡ ಅಲೋವೆರಾ ಜೆಲ್ ಹಚ್ಚುವುದರಿಂದ ತುರಿಕೆ ಬೇಗನೆ ಕಡಿಮೆಯಾಗುತ್ತದೆ.ಊತ ಇಳಿಯುತ್ತದೆ..
ತುಳಸಿ
ತುಳಸಿಯಲ್ಲಿ ಸಾಕಷ್ಟು ಔಷಧಿ ಗುಣಗಳಿದ್ದು ಸೊಳ್ಳೆ /ಜೇನು ಕಚ್ಚಿದ ಜಾಗದಲ್ಲಿ ತುಳಸಿ ರಸವನ್ನ ಹಚ್ಚಿ ಕೆಲ ನಿಮಿಷಗಳ ಕಾಲ ಹಾಗೆ ಬಿಟ್ಟು , ನಂತರ ಬೆಚ್ಚಗಿನ ನೀರಿನಿಂದ ತೊಳೆಯುವುದರಿಂದ ತುರಿಕೆ ಕಡಿಮೆಯಾಗುತ್ತದೆ ಹಾಗೂ ಆ ಜಾಗವನ್ನು ತಂಪು ಮಾಡುತ್ತದೆ.